International Journal of Multidisciplinary Evolutionary Research

ಬೆಂಗಳೂರಿನಲ್ಲಿ ಗಾಂಧೀಜಿಯವರ ಸಾಮಾಜಿಕ ಹೆಜ್ಜೆಗುರುತುಗಳು

Dr. Shaila KN1

  1. 1
Version of record

This is an author-deposited copy. The version of record was originally published elsewhere: Originally published in International Journal of Multidisciplinary Evolutionary Research, Volume 6, Issue 1, 2025. DOI 10.54660/IJMER.2025.6.1.57-61 . Original source: https://www.internationalmultiresearch.com/archives/year-2025.vol-6.issue-1.

Abstract

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರವು ಕೇವಲ ರಾಜಕೀಯ ಸ್ವಾತಂತ್ರ್ಯದ ಹೋರಾಟಕ್ಕೆ ಸೀಮಿತವಾಗಿರದೆ, ಸಾಮಾಜಿಕ ಪುನರ್‌ನಿರ್ಮಾಣ, ಸಮಾನತೆ, ಅಸ್ಪೃಶ್ಯತಾ ನಿವಾರಣೆ, ಮಹಿಳಾ ಜಾಗೃತಿ, ಸ್ವಾವಲಂಬನೆ ಹಾಗೂ ನೈತಿಕ ಮೌಲ್ಯಗಳ ಪ್ರತಿಷ್ಠಾಪನೆಯೊಂದಿಗೆ ಆಳವಾಗಿ ಸಂಬಂಧಿಸಿದೆ. ಈ ವಿಶಾಲವಾದ ಗಾಂಧೀ ಚಿಂತನೆಯು ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರತಿಫಲಿಸಿದಂತೆ, ಬೆಂಗಳೂರಿನ ಜನರ ಸಾಮಾಜಿಕ ಮತ್ತು ಸಾರ್ವಜನಿಕ ಬದುಕಿನ ಮೇಲೆಯೂ ಗಮನಾರ್ಹವಾದ ಪ್ರಭಾವವನ್ನು ಬೀರಿತು. ಗಾಂಧೀಜಿಯವರ ಬೆಂಗಳೂರಿನ ಭೇಟಿಗಳು ಮತ್ತು ಅವರೊಂದಿಗೆ ಬೆಸೆದುಕೊಂಡಿದ್ದ ಸ್ಥಳೀಯ ನಾಯಕರು, ಸಮಾಜ ಸುಧಾರಕರು ಹಾಗೂ ಮಹಿಳಾ ಕಾರ್ಯಕರ್ತರ ಚಟುವಟಿಕೆಗಳು ನಗರದ ಸಾಮಾಜಿಕ ಜಾಗೃತಿಗೆ ಹೊಸ ಆಯಾಮವನ್ನು ನೀಡಿದವು. ಈ ಲೇಖನವು ಬೆಂಗಳೂರಿನಲ್ಲಿ ಗಾಂಧೀಜಿಯವರ ಸಾಮಾಜಿಕ ಚಿಂತನೆಗಳು ಮತ್ತು ಸಮಾಜಮುಖಿ ಕಾರ್ಯಗಳ ಪ್ರತಿಫಲನವನ್ನು ಪರಿಶೀಲಿಸುತ್ತದೆ. ಗಾಂಧೀಜಿಯವರ ವಿಚಾರಗಳು ಮತ್ತು ಭಾಷಣಗಳು ರಾಜಕೀಯ ಸಭೆಗಳ ಮಟ್ಟದಲ್ಲಿ ಉಳಿಯದೆ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಪ್ರತಿಧ್ವನಿಸಿದವು ಎಂಬುದನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ವಿಶೇಷವಾಗಿ ಮಹಿಳೆಯರನ್ನು ರಾಷ್ಟ್ರೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ ಗಾಂಧೀ ಚಿಂತನೆಯು, ಮಹಿಳಾ ಜಾಗೃತಿಯ ವಿಸ್ತರಣೆಗೆ ಪೂರಕವಾದ ಸಾಮಾಜಿಕ ವಾತಾವರಣವನ್ನು ರೂಪಿಸಿತು. ಬೆಂಗಳೂರಿನ ಸಾರ್ವಜನಿಕ ವಲಯದಲ್ಲಿ ಗಾಂಧೀಜಿಯವರ ಚಿಂತನೆಗೆ ದೊರೆತ ಸ್ಪಂದನೆ, ಸ್ಥಳೀಯ ಸಂಘಟನೆಗಳ ಚಟುವಟಿಕೆಗಳು ಹಾಗೂ ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಕುರಿತು ರೂಪುಗೊಂಡ ಹೊಸ ಸಾಮಾಜಿಕ ಸಂವೇದನೆಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.  

Keywords: ಗಾಂಧೀಜಿಪ್ರವಾಸಅಸ್ಪೃಶ್ಯತಾ ನಿವಾರಣೆಮಹಿಳೆಸಂದೇಶ

How to cite

Licensed under CC BY 4.0.